Ration Card
ರಾಜ್ಯದ ಜನರ ಪ್ರಮುಖ ದಾಖಲೆಗಳಲ್ಲಿ(Important document) ಪಡಿತರ ಚೀಟಿ(Ration Card) ಸಹ ಒಂದಾಗಿದೆ. ರಾಜ್ಯ ಸರ್ಕಾರವು(State Government) ಪಡಿತರ ಚೀಟಿ ಹೊಂದಿದಂತಹ ಜನರಿಗೆ ಪ್ರತಿ ತಿಂಗಳೂ ಕಡಿಮೆ ಬೆಲೆಯಲ್ಲಿ ಪಡಿತರವನ್ನು ನೀಡುತ್ತದೆ. ಅದರಲ್ಲೂ ಬಿಪಿಲ್ ಕಾರ್ಡ್‌ದಾರರಿಗೆ(BPL Card) ಹೆಚ್ಚಿನ ಸೌಲಭ್ಯವನ್ನು ನೀಡಲಾಗುತ್ತದೆ.
ಇದೀಗ ಹೊಸ ರೇಷನ್ ಕಾರ್ಡ್‌ಗೆ(New ration card) ಅರ್ಜಿ(Application) ಸಲ್ಲಿಸಬಯಸುವವರಿಗೆ ಆಹಾರ ಇಲಾಖೆ (Food Department) ಪಡಿತರ ಚೀಟಿ ದಾರರಿಗೆ ಮತ್ತೊಮ್ಮೆ ಗುಡ್ ನ್ಯೂಸ್ ಕೊಟ್ಟಿದ್ದು, ಕಾರ್ಡ್ ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಫೆಬ್ರವರಿ ಅಂತ್ಯದವರೆಗೆ ಅವಕಾಶ ನೀಡಿದೆ. ಇಂದಿನ ಈ ಲೇಖನದಲ್ಲಿ ರೇಷನ್ ಕಾರ್ಡ್‌ನಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡುವುದೇಗೆ ಅನ್ನೋದರ ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹೊಸದಾಗಿ ಮದುವೆಯಾದವರು ತಮ್ಮ ಪತ್ನಿಯ ಹೆಸರು ಹಾಗೂ ಮಕ್ಕಳ ಹೆಸರುಗಳನ್ನು ಸೇರಿಸಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ…
ಹಲವು ಯೋಜನೆಗಳು ಹಾಗೂ ಕಡಿಮೆ ದರದಲ್ಲಿ ಜನರಿಗೆ ಪಡಿತರ ಸಿಗಲೆಂದು ಸರ್ಕಾರವು ಪಡಿತರ ಚೀಟಿಗಳನ್ನು ನೀಡುತ್ತದೆ. ಇದೀಗ ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ನೀವು ಸೇರಿಸಬಹುದು. ಹೊಸದಾಗಿ ಮದುವೆಯಾದವರು ತಮ್ಮ ಪತ್ನಿಯ ಹೆಸರು ಹಾಗೂ ಮಕ್ಕಳ ಹೆಸರನ್ನೂ ಸೇರಿಸಬಹುದು. ಆನ್‌ಲೈನ್‌ನಲ್ಲಿ ನೀವು ತುಂಬಾ ಸುಲಭವಾಗಿ ಮನೆಯ ಹೊಸ ಸದಸ್ಯರ ಹೆಸರುಗಳನ್ನು ಸೇರಿಸಬಹುದು.
ಹೌದು, ನಿಮ್ಮ ಮನೆಯ ಪಡಿತರ ಚೀಟಿಗೆ ನಿಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರು ಸೇರ್ಪಡೆಯಾಗದಿದ್ದರೆ ಚಿಂತಿಸಬೇಕಾಗಿಲ್ಲ. ಮನೆಯಿಂದಲೇ ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಸದಸ್ಯರ ಹೆಸರನ್ನು ಸೇರಿಸಬಹುದು. ಇದಕ್ಕಾಗಿ ನೀವು ಕುಟುಂಬ ಮುಖ್ಯಸ್ಥರ ಪಡಿತರ ಚೀಟಿ ಮತ್ತು ಅದರ ಫೋಟೋ ಪ್ರತಿಯನ್ನು ಹೊಂದಿರಬೇಕು. ಪಡಿತರ ಚೀಟಿಗೆ ನಿಮ್ಮ ಮಗುವಿನ ಹೆಸರು ಸೇರ್ಪಡೆ ಮಾಡಬೇಕೆಂದರೆ ಮಗುವಿನ ಜನನ ಪ್ರಮಾಣ ಪತ್ರ ಮತ್ತು ಹೆತ್ತವರ ಆಧಾರ್ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ಅಲ್ಲದೆ ವಿವಾಹಿತ ಮಹಿಳೆಯ ಹೆಸರನ್ನು ಪಡಿತರ ಚೀಟಿಗೆ ಸೇರಿಸಬೇಕಾಗುತ್ತದೆ.
ಪಡಿತರ ಚೀಟಿಯಲ್ಲಿ ಹೊಸದಾಗಿ ನಿಮ್ಮ ಪತ್ನಿಯ ಹೆಸರು ಸೇರಿಸಲು ಅವರ ಆಧಾರ್ ಕಾರ್ಡ್, ಮದುವೆ ಪ್ರಮಾಣ ಪತ್ರ ಮತ್ತು ಪೋಷಕರ ಪಡಿತರ ಚೀಟಿಯ ದಾಖಲೆಗಳು ಅಗತ್ಯವಾಗಿ ಬೇಕಾಗುತ್ತದೆ. ಇನ್ನು ಮಗುವಿನ ಹೆಸರು ಸೇರಿಸಲು ಆ ಮಗುವಿನ ಜನನ ಪ್ರಮಾಣಪತ್ರ ಮತ್ತು ಹೆತ್ತವರ ಅಂದರೆ ತಂದೆ-ತಾಯಿಯ ಆಧಾರ್ ಕಾರ್ಡ್ ದಾಖಲೆಗಳು ಬೇಕಾಗುತ್ತವೆ.
ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ನಿಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಸೇರಿಸಲು, ನಿಮ್ಮ ರಾಜ್ಯದ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇದರ ನಂತರ ನೀವು IDಯನ್ನು ರಚಿಸಬೇಕಾಗುತ್ತದೆ. ನಿಮ್ಮ ಐಡಿಯನ್ನು ಈಗಾಗಲೇ ಕ್ರಿಯೆಟ್ ಮಾಡಿದ್ದರೆ ನೀವು ಲಾಗಿನ್ ಆಗಬೇಕು. ನಂತರ ನಿಮ್ಮ ಪಡಿತರ ಚೀಟಿಯ ವಿವರಗಳನ್ನು ಕಾಣುತ್ತೀರಿ. ಅದರಲ್ಲಿ ಹೊಸ ಸದಸ್ಯರನ್ನು ಸೇರಿಸುವ ಆಯ್ಕೆ ಕಾಣುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಹೊಸ ಸದಸ್ಯರನ್ನು ಸೇರಿಸಲು ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ.
ಇದರ ಜೊತೆಗೆ ಹೊಸ ಸದಸ್ಯರ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು. ನಂತರ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ವಿವರಗಳು ಮತ್ತು ದಾಖಲೆಗಳನ್ನು ಭರ್ತಿ ಮಾಡಿದ ನಂತರ, ನೀವು ಫಾರ್ಮ್ ಅನ್ನು Submit ಮಾಡಬೇಕಾಗುತ್ತದೆ. ನಂತರ ನಿಮ್ಮ ನೋಂದಣಿ ಸಂಖ್ಯೆಯನ್ನು ಸ್ವೀಕರಿಸುತ್ತೀರಿ.
ಇದೇ ನೋಂದಣಿ ಸಂಖ್ಯೆಯೊಂದಿಗೆ ನಿಮ್ಮ ವಿನಂತಿಯನ್ನು ನೀವು ಟ್ರ್ಯಾಕ್ ಮಾಡಬಹುದು. ನಂತರ ನಿಮ್ಮ ಫಾರ್ಮ್ ಮತ್ತು ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಎಲ್ಲವೂ ಸರಿಯಾಗಿದ್ದರೆ ಹೊಸ ಸದಸ್ಯರ ಹೆಸರನ್ನು ಪಡಿತರ ಚೀಟಿಗೆ ಸೇರಿಸಲಾಗುತ್ತದೆ. ಹತ್ತಿರದ ಪಡಿತರ ಅಂಗಡಿಗೆ ಹೋಗುವ ಮೂಲಕ ನಿಮ್ಮ ಪಡಿತರ ಚೀಟಿಯಲ್ಲಿ ನಿಮ್ಮ ಹೆಸರನ್ನು ಸೇರ್ಪಡೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ನೀವು ರಾಜ್ಯದ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಇನ್ನೂ ನೀವು ಬೆಂಗಳೂರು ಒನ್, ಸೈಬರ್ ಸೆಂಟರ್ ಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಎಪಿಎಲ್ ಕಾರ್ಡ್ ಪಡೆಯುವವರು ಕೂಡ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರೆ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗಿದೆ. https://ahara.karnic.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದು.
ಬೆಂಗಳೂರು ಒನ್, ಸೈಬರ್ ಸೆಂಟರ್ ಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ವಟ್ನಲ್ಲಿ ಸ್ವಯಂ ಆಗಿ ಅರ್ಜಿ ಸಲ್ಲಿಸಬಹುದು. ಎಪಿಎಲ್ ಕಾರ್ಡ್ ಪಡೆಯುವವರು ಕೂಡ ಆನ್ನೈನ್ ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರೆ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗುವುದು. https://ahara.kar.nic.in ವೆಬ್ಟ್ ಗಮನಿಸಬಹುದಾಗಿದೆ.
ಹೆಸರು ಸೇರಿಸಲು ಈ ದಾಖಲೆಗಳು ಕಡ್ಡಾಯ
- – ಪಡಿತರ ಚೀಟಿಯ ಮೂಲ ದಾಖಲೆ
- – ಮಗುವಿನ ಜನನ ಪ್ರಮಾಣಪತ್ರ ಜೊತೆಗೆ ಮಗುವಿನ ಪೋಷಕರ ಆಧಾರ್ ಕಾರ್ಡ್
- – ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾರ್ ಕಾರ್ಡ್
- – ಗಂಡನ ಮನೆಯ ಪಡಿತರ ಚೀಟಿ ಪ್ರತಿ. ಈ ದಾಖಲೆಗಳು ಇದ್ದರೆ ನೀವು ಆನ್ಲೈನ್ ಮುಖಾಂತರ ರೇಷನ್ ಕಾರ್ಡ್ನಲ್ಲಿ ನಿಮ್ಮ ಹೆಸರನ್ನು ಸೇರಿಸಬಹುದು.
ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ನಿಮ್ಮ ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರ ಜೊತೆಗೆ ಮಗುವಿನ ಪೋಷಕರ ಆಧಾರ್ ಕಾರ್ಡ್ ಬೇಕಾಗುತ್ತದೆ. ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾರ್ ಮತ್ತು ಗಂಡನ ಮನೆಯ ಪಡಿ ತರ ಚೀಟಿ ಪ್ರತಿಯನ್ನು ನೀಡಬೇಕಾಗುತ್ತದೆ.
– ಅಧಿಕೃತ ವೆಬ್ ಸೈಟ್ ಗೆ https://ahara.kar.nic.in/home ಭೇಟಿ ನೀಡಿ
– ಮುಖ್ಯ ಪುಟದಲ್ಲಿ ಇ-ಸೇವೆಗಳನ್ನು ಆಯ್ಕೆ ಮಾಡಿ.
– ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ.
– ಹೊಸ ಪೇಜ್ ನಲ್ಲಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅನಲೋಡ್ ಮಾಡಿ.
– ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್ಮೀಟ್ ಮಾಡಿ.
ಅರ್ಜಿ ಸಲ್ಲಿಸುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನಗೆ ಅಪ್‌ಡೇಟ್ ಆಗಿರುವ ಹೊಸ ಪಡಿತರ ಚೀಟಿ ನೀಡಲಾಗುತ್ತದೆ.